ದಿನಾಂಕ 11/01/2025ರಂದು ವನಿತಾ ಸದನದಲ್ಲಿ ಮಕ್ಕಳಿಗಾಗಿ ಸಂಸ್ಧೆಯ ವತಿಯಿಂದ ಶ್ರೀಯುತ. ಪ್ರಶಾಂತ್ ಹೆಗಡೆ ಶಿವಮೊಗ್ಗ ಇವರಿಂದ ಮನರಂಜನಾ ಜಾದೂ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಕ್ಕಳಿಗೆ ತುಂಬಾ ಸೊಗಸಾಗಿ ಮನರಂಜನೆ ಹಾಗೂ ಹಾಸ್ಯದಿಂದ ಜಾದೂವನ್ನು ಶ್ರೀಯುತ. ಪ್ರಶಾಂತ್ ಹೆಗಡೆಯವರು ಮಕ್ಕಳಿಗೆ ಆನೇಕ ವಿಧ ವಿಧವಾದ ಜಾದೂವನ್ನು ಮಾಡಿ ತೋರಿಸಿದರು. ಈ ಕಾರ್ಯಕ್ರಮದ ಪ್ರಯೋಜಕತ್ವವನ್ನು ವನಿತಾ ಸದನ ಹಳೆಯ ವಿದ್ಯಾರ್ಥಿಯವರಾದ ಶ್ರೀಯುತ. ಜಿ.ವಿ. ಸುಂದರ್‍ರವರು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮವು ತುಂಬಾ ಸೊಗಸಾಗಿ ಮೂಡಿಬಂದಿತು.