ದಿನಾಂಕ 31/05/2024 ರಂದು ಶಾಲಾ ಪ್ರಾರಂಭೋತ್ಸವವನ್ನು ಮಾಡಲಾಯಿತು. ಮಕ್ಕಳ ಸ್ವಾಗತಕ್ಕಾಗಿ ಟ್ರಸ್ಟ್‍ನ ಅಧ್ಯಕ್ಷರು, ಟ್ರಿಸ್ಟಿಗಳು, ಸಂಸ್ಧೆಯ ಕಾರ್ಯದರ್ಶಿನಿಯವರು ಆಗಮಿಸಿದ್ದರು. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದು ಹೂವುಗಳಿಂದ ಅಲಂಕರಿಸಲಾಗಿತ್ತು. ಮಕ್ಕಳಿಗೆ ಹೂವು ಮತ್ತು ಸಿಹಿಯನ್ನು ನೀಡಿ ಶುಭ ಆಶೀರ್ವಾದದೊಂದಿಗೆ ಸ್ವಾಗತಿಸಲಾಯಿತು.
ಅದೇ ದಿನ 31/05/2024ರಂದು ವಿಶ್ವ ತಂಬಾಕು ರಹಿತ ದಿನದ ಬಗ್ಗೆ ಮಾಹಿತಿಯನ್ನು ಮಕ್ಕಳಿಗೆ ನೀಡಿ ಪ್ರತಿಜ್ಞಾವಿಧೀಯನ್ನು ಬೋಧಿಸಲಾಯಿತು.