75ನೇ ಸ್ವಾತಂತ್ರ್ಯ ಮಹೋತ್ಸವವನ್ನು ವನಿತಾಸದನದ ಸಂಸ್ಧೆಯಲ್ಲಿ ಬಹಳ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಲಾಯಿತು ಎಂದು ತಿಳಿಸಲು ಹೆಮ್ಮೆಯಾಗುತ್ತದೆ. ಶ್ರೀಯುತ. ರೋಟರಿಯನ್ ಇಫ್ತೇಖರ್ ಅಹ್ಮದ್ (ಅಧ್ಯಕ್ಷರು ಆರ್.ಐ.ಸಿ.ಎಂ) ಹಾಗೂ ಶ್ರೀಮತಿ. ರೋಟರಿಯನ್ ಲತಾಸಚ್ಚಿ (ಕಾರ್ಯದರ್ಶಿಗಳು, ಆರ್.ಐ.ಸಿ.ಎಂ) ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ. ಬಿ.ಆರ್.ರವಿ (ಅಧ್ಯಕ್ಷರು, ಟ್ರಸ್ಟಿ ವನಿತಾಸದನ) ಇವರು ವಹಿಸಿಕೊಂಡಿದ್ದರು. ಸಂಸ್ಧಾಪಕರ ಕುಟುಂಬ ವರ್ಗದವರಾದ ಶ್ರೀಮತಿ. ಭಾರತಿ ಹಾಗೂ ಶ್ರೀಮತಿ. ಶ್ಯಾಮಲಜಯರಾಂ ರವರು ಸದನದ ಟ್ರಸ್ಟಿಗಳು, ಸದಸ್ಯರು, ಆರ್.ಐ.ಸಿ.ಎಂ ಸದಸ್ಯರು, ಶಿಕ್ಷಕರು, ಸಿಬ್ಬಂದಿವರ್ಗದವರು, ಬಹಳ ಉತ್ಸಾಹದಿಂದ ಪಾಲ್ಗೂಂಡಿದ್ದರು. ಆರ್.ಐ.ಸಿ.ಎಂ ವತಿಯಿಂದ ಎರಡು ಕಾಲುಗಳನ್ನು ಕಳೆದು ಕೊಂಡು ಬದುಕಿನಲ್ಲಿ ಹೋರಾಟ ಮಾಡುತ್ತಿದ್ದ ಒಬ್ಬ ವ್ಯಕ್ತಿಗೆ ವ್ಹೀಲ್ಚೇರ್ ನೀಡುವುದರ ಮೂಲಕ 75ನೇ ಸ್ವಾತಂತ್ರ್ಯ ಮಹೋತ್ಸವವನ್ನು ಸಾರ್ಥಕ ರೀತಿಯಲ್ಲಿ ಆಚರಿಸಲಾಯಿತು.