ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಪ್ರಯುಕ್ತ ದಿನಾಂಕ-02/07/2024 ರ ಸೋಮವಾರ ವನಿತಾಸದನ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಬಾಹ್ಯಾಕಾಶದ ದಿನಾಚರಣೆಯ ಮಹತ್ವ ಮತ್ತು ಉದ್ದೇಶವನ್ನು ಮಕ್ಕಳಿಗೆ ಸಹ ಶಿಕ್ಷಕರಾದ ಶ್ರೀಯುತ. ಪ್ರಶಾಂತ್‍ರವರು ತಿಳಿಸಿದರು. ನಂತರದಲ್ಲಿ ಸಂಸ್ಧೆಯ ಆಡಳಿತಾಧಿಕಾರಿಗಳಾದ ಶ್ರೀಯುತ. ಶ್ರೀಕಾಂತ್‍ರವರು ಬಾಹ್ಯಕಾಶದ ಬಗ್ಗೆ, ಉಪಗ್ರಹಗಳ ಉಡಾವಣೆ ಬಗ್ಗೆ ಮುಖ್ಯವಾಗಿ ಚಂದ್ರಯಾನ-3 ರ ಬಗ್ಗೆ, ಇಸ್ರೋ ಕೇಂದ್ರದ ಬಗ್ಗೆ ಹಾಗೂ ಮುಂದಿನ ಯೋಜನೆಗಳನ್ನು ಪ್ರಾತ್ಯಕ್ಷಿಕ ಮತ್ತು ವಿಡಿಯೋಗಳ ಮೂಲಕ ವಿವರಿಸಿದರು. ಮಕ್ಕಳಿಗೆ ಇಸ್ರೋದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಉತ್ತರಕೊಟ್ಟವರಿಗೆ ಬಹುಮಾನ ನೀಡಲಾಯಿತು. ಟ್ರಸ್ಟಿವರಾದ ಶ್ರೀ. ರವಿಸರ್‍ರವರು ಬಾಹ್ಯಾಕಾಶ ಚಂದ್ರಯಾನ-3 ಬಗ್ಗೆ ಇನ್ನೋ ಹೆಚ್ಚಿನ ಮಾಹಿತಿಯನ್ನು ನೀಡಿದರು.



