ದಿನಾಂಕ 26/08/2024ರಂದು ವನಿತಾ ಸದನ ಪ್ರೌಢಶಾಲಾ ವಿಭಾಗದಿಂದ 37 ವಿದ್ಯಾರ್ಥಿಗಳು ಮತ್ತು 3 ಶಿಕ್ಷಕರು Jawaharlal Nehru Center for advanced Scientific research ಭೇಟಿ ಮಾಡಿದರು. ಮೊದಲು ಡಾ|| ರಂಜಿನಿ ವಿಶ್ವನಾಥ್ ವಿಜ್ಞಾನಿಯವರಿಂದ Nano technology ಯ ಬಗ್ಗೆ ತುಂಬಾ ಚೆನ್ನಾಗಿ ಹೇಳಿದರು. ನಂತರ ಡಾ||ವಿನಾಯಕ ಸರ್ ಅವರಿಂದ ವಿದ್ಯಾರ್ಥಿಗಳ ಜೊತೆ ಸಂವಾದ ತುಂಬ ಚೆನ್ನಾಗಿ ಮೂಡಿ ಬಂತು ನಂತರ C.N. Rao ಅವರ Science galary ಭೇಟಿ ಮಾಡಿದರು. ಊಟದ ವ್ಯವಸ್ಧೆ ಮಾಡಿದ್ದರು. ಮಧ್ಯಾಹ್ನ ಅವಧಿಯಲ್ಲಿ ಡಾ||ಶ್ವೇತ ಶಿವ ಶಂಕರ ಮೇಡಂ ಅವರು ತುಂಬಾ ಚೆನ್ನಾಗಿ Virology ಯ ಬಗ್ಗೆ ತಿಳಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಂತರದ ಅವಧಿಯಲ್ಲಿ ಡಾ|| ವಿನಾಯಕ ಅವರು ಬೆಳಕಿನ ಚದುರುವಿಕೆಯ ಬಗ್ಗೆ ಪ್ರಯೋಗದ ಮೂಲಕ ತಿಳಿಸಿದರು.