ದಿನಾಂಕ 01/07/2024ರಿಂದ ವನಿತಾಶಾಲೆ ಸಂಸ್ಧೆಯಲ್ಲಿ Vocational Course ಗಳು ಪ್ರಾರಂಭವಾಗಿರುತ್ತದೆ. ಅವುಗಳು ಯಾವುದೆಂದರೆ ನುಡಿ ಟೈಪಿಂಗ್, ಸಂಗೀತ, ಡ್ರಾಯಿಂಗ್, ಎಂಬ್ರಾಯಿಡರಿ, ಹಾರ್ಡ್ವೇರ್(ಕಂಪ್ಯೂಟರ್) ಕ್ಯಾಂಡಲ್, ತರಗತಿಗಳು ಪ್ರಾರಂಭವಾಗಲಿದೆ. ಮಕ್ಕಳಿಗೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 4ಗಂಟೆಯಿಂದ 5ಗಂಟೆಯವರೆಗೆ ತರಗತಿಗಳು ನಡೆಯುತ್ತವೆ. ಈ ತರಗತಿಗಳ ಉದ್ಘಾಟನಾ ಸಮಾರಂಭವನ್ನು ದಿನಾಂಕ 01/07/2024 ರಂದು ಮಾಡಲಾಯಿತು. ಉದ್ಘಾಟನಾ ಸಮಾರಂಭಕ್ಕೆ ಸಂಸ್ಧೆಯ ಟ್ರಸ್ಟ್ ನ ಅಧ್ಯಕ್ಷರಾದ ಬಿ.ಆರ್. ರವಿಸರ್, ಟ್ರಸ್ಟಿಗಳಾದ ಶ್ರೀನಿವಾಸ್ ಸರ್, ಗೌ||ಕಾರ್ಯದರ್ಶಿನಿಯವರಾದ ಯಶಸ್ವಿನಿ ಜಗದೀಶ್, ಪ್ರೌಢಶಾಲಾ ಮುಖ್ಯ ಶಿಕ್ಷಕಿಯವರಾದ ಶ್ರೀಮಿತಿ. ಶಿವಮ್ಮ ಹಾಗೂ ಸಂಸ್ಧೆಯ ಆಡಳಿತಾಧಿಕಾರಿಗಳಾದ ಶ್ರೀಯುತ. ಶ್ರೀಕಾಂತ್ರವರು, ಹಾಜರಿದ್ದರು. ಹಾಗೂ ಎಲ್ಲಾ ತರಗತಿಗಳಾದ ಶಿಕ್ಷಕವೃಂದದವರು ಹಾಜರಿದ್ದರು