ದಿನಾಂಕ 06/03/2024 ರಂದು ವನಿತಾಸದನದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರಥಮ್ ಸಂಸ್ಧೆಯ ಸಿ.ಇ.ಓ. ಆದ ಶೇಷಾದ್ರಿರವರು ಆಗಮಿಸಿದ್ದರು ಪ್ರಥಮ್ ಸಂಸ್ಧೆಯ ವಿಜ್ಞಾನ ವಿಷಯದ ವ್ಯವಸ್ಧಾಪಕರಾದ ಶ್ರೀಮತಿ. ಚಿನ್ಮಯಿ ಮತ್ತು ರಾಜೇಶ್, ಪೂಜಾ ಮತ್ತು ದಿನಕರ್‍ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನೆರವೇರಿತು. ಹಾಗೂ ವನಿತಾಸದನದ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ. ಬಿ.ಆರ್. ರವಿ, ಸಂಸ್ಧೆಯ ಅಧ್ಯಕ್ಷರಾದ ಶ್ರೀಮತಿ. ಭಾರತಿ ಮೇಡಂ ಗೌ||ಕಾರ್ಯದರ್ಶಿನಿಯವರಾದ ಶ್ರೀಮತಿ. ಯಶಸ್ವಿನಿಜಗದೀಶ್‍ರವರು, ಟ್ರಸ್ಟಿಗಳಾದ ಶ್ರೀಯುತ. ಶ್ರೀನಿವಾಸ್‍ರಾವ್‍ರವರು, ಹಾಗೂ ಶ್ರೀಯುತ ಹೇಮಂತ್ ರವರು ಆಗಮಿಸಿದ್ದರು.


