ದಿನಾಂಕ 24/02/2024ರ ಶನಿವಾರ ವನಿತಾಸದನದಲ್ಲಿ ಶ್ರೀ. ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಲಾಗಿತ್ತು. ಪೂಜೆಗೆ ಸಂಸ್ಧೆಯ ಆಧ್ಯಕ್ಷರಾದ ಶ್ರೀಮತಿ. ಎನ್. ಭಾರತಿ, ಮತ್ತು ಗೌ|| ಕಾರ್ಯದರ್ಶಿನಿಯವರಾದ ಶ್ರೀಮತಿ. ಯಶಸ್ವಿನಿ ಜಗದೀಶ್, ಹಾಗೂ ಕಾರ್ಯಕಾರಿಣಿ ಸಮಿತಿಯ ಸದಸ್ಯರು, ಟ್ರಸ್ಟಿಗಳು, ಸದಸ್ಯರು, ಶಿಕ್ಷಕವೃಂದದವರು ಆಗಮಿಸಿದ್ದರು. ಪೂಜೆಯ ನಂತರ ಶ್ರೀಯುತ. ರಾಮಚಂದ್ರರವರಿಗೆ ಸಂಸ್ಧೆಯ ಪರವಾಗಿ ಸನ್ಮಾನವನ್ನು ಮಾಡಲಾಯಿತು. ನಂತರ ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಯಿತು.