ದಿನಾಂಕ 17/01/2024 ವನಿತಾ ಸದನ ಸಂಸ್ಧೆ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಸ್ಧೆಯ ಉಪಾಧ್ಯಕ್ಷರಾದ ಶ್ರೀಮತಿ. ರಾಧಾ ಮೇಡಂ ಅವರು ಸಂಕ್ರಾಂತಿಯ ವಿಶೇಷತೆಯನ್ನು ತಿಳಿಸಿದರು. ಸದನದ ಉಪಕಾರ್ಯದರ್ಶಿನಿಯವರಾದ ಶ್ರೀಮತಿ. ನಾಗರತ್ನಮ್ಮ ಅವರು ಸಂಕ್ರಾಂತಿ ಸಂಭ್ರಮ ಕುರಿತಾದ ಹಾಡು ಹಾಡಿದರು. ಸದಸ್ಯೆಯರು ನೃತ್ಯ ಮಾಡಿದರು. ಗೌರವ ಕಾರ್ಯದರ್ಶಿನಿಯವರು ಮತ್ತು ಅಧ್ಯಕ್ಷರಾದ ಭಾರತಿಮೇಡಂ ಅವರು ಸುಮಧುರಗೀತೆಗಳನ್ನು ಹಾಡಿದರು. ಅಂತಿಮವಾಗಿ ಆಗಮಿಸಿದ್ದು ಎಲ್ಲಾ ಸದಸ್ಯೆಯರೆಲ್ಲರು ತಮ್ಮ ತಮ್ಮ ಮನೆಗಳಿಂದ ತಂದಿದ್ದ ಎಳ್ಳು-ಬೆಲ್ಲಗಳನ್ನು ಒಟ್ಟಾಗಿ ಸೇರಿಸಿ ನಂತರ ಪರಸ್ಪರ ಹಾಡಿಕೊಂಡರು. ಈ ಸುಂದರ ಸಂಕ್ರಾಂತಿ ಸಂಭ್ರಮದ ಕಾರ್ಯಕ್ರಮಕ್ಕೆ ನಾಂದಿಯಾಡಿದ ಹೆಗ್ಗಳಿಕೆ ಗೌರವ ಕಾರ್ಯದರ್ಶಿನಿಯವರಾದ ಶ್ರೀಮತಿ. ಯಶಸ್ವಿನಿಜಗದೇಶ್ ಅವರಿಗೆ ಸಲ್ಲುತ್ತದೆ.






