ದಿನಾಂಕ 2/10/2023ರ ಸೋಮವಾರ ಬೆಳಿಗ್ಗೆ 8.30ಗಂಟೆಗೆ ವನಿತಾಸದನದಲ್ಲಿ ಗಾಂಧಿಜಯಂತಿ ಮತ್ತು ಲಾಲ್‍ಬಹದ್ದೂರ್‍ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಶ್ರೀಮತಿ. ಭಾರತಿಮೇಡಂ, ಗೌ||ಕಾರ್ಯದರ್ಶಿನಿಯವರಾದ ಶ್ರೀಮತಿ. ಯಶಸ್ವಿನಿಜಗದೀಶ್‍ರವರು, ಟ್ರಸ್ಟಿಗಳಾದ ಶ್ರೀಯುತ. ಶ್ರೀನಿವಾಸ್‍ರಾವ್‍ರವರು, ಆಡಳಿತಾಧಿಕಾರಿಗಳಾದ ಶ್ರೀಯುತ. ಶ್ರೀಕಾಂತ್‍ರವರು, ಸಂಸ್ಧೆಯ ಸದಸ್ಯರುಗಳು, ಶಿಕ್ಷಕವೃಂದದವರು, ಸಿಬ್ಬಂಧಿವರ್ಗದವರು ಹಾಜರಿದ್ದರು.