ದಿನಾಂಕ 09/09/2023 ನಮ್ಮ ಶಾಲೆಗೆ ವಿಜ್ಞಾನ ಹರಟೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಬೆಂಗಳೂರಿನಿಂದ ಇಸ್ರೋ ಸಂಸ್ಧೆಯ ನಿವೃತ್ತ ವಿಜಾÐನಿಗಳಾದ ಶ್ರೀಮತಿ. ಸೀತಾಸುಂದರಂ ಆಗಮಿಸಿದ್ದರು. ವಿಜ್ಞಾನ ಹರಟೆ ಆಯೋಜಕರಾದ ಶ್ರೀಯುತ ಸುಭಾನ್‍ಕರ್ ಬಿಸ್‍ವಾಸ್ ಅವರು ಆಗಮಿಸಿದ್ದರು. ಚಂದ್ರಯಾನ-3 ಕುರಿತಂತೆ ಅನೇಕ ವಿಚಾರಗಳನ್ನು ನಮ್ಮ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು ಮತ್ತು ಚಂದ್ರಯಾನ-3 ರ ಕಾರ್ಯವೈಖರಿಯನ್ನು ಉದ್ದೇಶವನ್ನು ಉಪಯೋಗವನ್ನು ನಮ್ಮ ಹೆಮ್ಮೆಯ ವಿಜ್ಞಾನಿಗಳ ಸಾದನೆಯನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು.