ದಿನಾಂಕ 15/08/23ರ ಬೆಳಿಗ್ಗೆ 8-ಗಂಟೆಗೆ ವನಿತಾಸದನ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕಮ್ಯಾಂಡರ್ ಎ.ಸಿ.ಎಸ್. ರಾವ್ ಮತ್ತು ಡಾ|| ವಸುಂಧರಾ ಫಿಲಯೋಜó ಅವರು ಆಗಮಿಸಿದ್ದರು. ಮುಖ್ಯ ಅತಿಥಿಯವರು ಧ್ವಜಾರೋಹಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಪಥಸಂಚಲನ, ಪೆರೆಟ್ ಬ್ಯಾಂಡ್ಸೆಟ್, ಶಾಲಾ ಶಿಕ್ಷಕಿಯರಿಂದ ದೇಶಭಕ್ತಿಗೀತೆ, ಮಕ್ಕಳಿಂದ ಲೆಜಿóಮ್ಸ್, ನೃತ್ಯ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಶ್ರೀಮತಿ. ಸುಶೀಲಾಬಾಯಿ ಶ್ರೀಮತಿ ನಾಗೇಶರಾವ್ ಟ್ರಸ್ಟ್ನ ಅಧ್ಯಕ್ಷರಾದ ಬಿ.ಆರ್. ರವಿ, ವನಿತಾಸದನದ ಅಧ್ಯಕ್ಷರಾದ ಶ್ರೀಮತಿ. ಎನ್. ಭಾರತಿ, ಗೌ||ಕಾರ್ಯದರ್ಶಿನಿಗಳಾದ ಶ್ರೀಮತಿ. ರೂಪವಾಣಿ, ಜಂಟಿ ಕಾರ್ಯದರ್ಶಿನಿಯವರಾದ ಶ್ರೀಮತಿ. ಶ್ಯಾಮಲಜಯರಾಂ ಟ್ರಸ್ಟಿಗಳಾದ ಶ್ರೀಯುತ. ಶ್ರೀನಿವಾಸ್ರಾವ್, ಶ್ರೀಯುತ. ಕರ್ನಲ್ರಾಜೇಂದ್ರರವರು, ಸಂಸ್ಧೆಯ ಸದಸ್ಯರುಗಳು, ಆಡಳಿತಾಧಿಕಾರಿಗಳಾದ ಶ್ರೀಯುತ. ಶ್ರೀಕಾಂತ್ರವರು, ಮಕ್ಕಳು, ಶಿಕ್ಷಕವೃಂದದವರು, ಸಿಬ್ಬಂಧಿ ವರ್ಗದವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ನಂತರ ಎಲ್ಲರಿಗೂ ಸಿಹಿಯನ್ನು ವಿತರಿಸಲಾಯಿತು.