ದಿನಾಂಕ 31/05/2023ರಂದು ವನಿತಾಸದನ ನರ್ಸರಿವಿಭಾಗ, ಪೂರ್ವಪ್ರಾಥಮಿಕ ವಿಭಾಗ, ಫ್ರೌಢಶಾಲೆವಿಭಾಗದ ಎಲ್ಲ ಶಾಲೆಗಳನ್ನು ಸರ್ಕಾರದ ಆದೇಶದನ್ವಯ ಅಧಿಕೃತವಾಗಿ ಪ್ರಾರಂಭ ಮಾಡಲಾಗಯಿತು. ಈ ಪ್ರಾರಂಭೊತ್ಸವದಲ್ಲಿ ನಮ್ಮ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ. ಎನ್. ಭಾರತಿ, ಕಾರ್ಯದರ್ಶಿನಿಯವರಾದ ರೂಪವಾಣಿ, ಉಪಕಾರ್ಯದರ್ಶಿನಿಯವರಾದ ಶ್ರೀಮತಿ. ಶ್ಯಾಮಾಲಾ ಜಯರಾಮ್, ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀಯುತ. ಬಿ.ಆರ್. ರವಿ ಟ್ರಸ್ಟಿಗಳಾದ ಶ್ರೀನಿವಾಸ್‍ರಾವ್, ಕರ್ನಲ್ ಶ್ರೀಯುತ. ರಾಜೇಂದ್ರಸರ್‍ರವರುಗಳು ಹಾಜರಿದ್ದರು.
ವನಿತಾಸದನ ಕ್ಕೆ ಹೊಸದಾಗಿ ನೇಮಕಗೊಂಡಿರುವ ಶ್ರೀಯುತ. ಶ್ರೀಕಾಂತ್‍ಸರ್‍ರವರು ಹಾಜರಿದ್ದರು. ಪ್ರೌಢಶಾಲಾ, ಹಿರಿಯಪ್ರಾಥಮಿಕ, ನರ್ಸರಿ ವಿಭಾಗದ ಎಲ್ಲಾ ಶಿಕ್ಷಕ ವೃಂದದವರು, ಆಡಳಿತ ಮಂಡಳಿಯವರು ಹಾಜರಿದ್ದರು. ಮಕ್ಕಳಿಗೆ ಸಿಹಿಯನ್ನು ವಿತರಿಸಲಾಯಿತು.









