ದಿನಾಂಕ 13/01/2023ರಂದು ನಮ್ಮ ಶಾಲೆಯಲ್ಲಿ ಶಾಸಕರಾದ ಎಸ್.ಎ.ರಾಮದಾಸ್ ಅವರು ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತೀರ್ಣರಾದ ಪ್ರೌಢಶಾಲಾ ಶಿಕ್ಷಕಿರೊಂದಿಗೆ ಸವಾಂದ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಉಪನಿರ್ದೇಶಕರಾದ ಶ್ರೀ. ರಾಮಚಂದ್ರ ಅರಸ್ರವರು ಎಸ್.ಎಸ್.ಎಲ್.ಸಿ. ಕೈಗೊಳ್ಳಬೇಕಾದ ಕ್ರಮಗಳನ್ನು ತಿಳಿಸಿದ್ರು. ದಕ್ಷಿಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ರಾಮರಾಧ್ಯರವರು ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು. ಮಾನ್ಯ ಶಾಸಕರಾದ ರಾಮದಾಸ್ ಅವರು ಮಾತನಾಡಿ ಮುಖ್ಯಶಿಕ್ಷಕರಿಗೆ ಉಪಯುಕ್ತ ಸಲಹೆ ಮಾರ್ಗದರ್ಶನ ನೀಡಿದರು. ಮತ್ತು ಎಸ್.ಎ.1 ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಚಂದನಾಳಿಗೆ ಸನ್ಮಾನಿಸಿ ಭವಿಷ್ಯದ ಫಲಿತಾಂಶಕ್ಕಾಗಿ ಪ್ರೋತ್ಸಾಹಿಸಿದರು. ಸಂಸ್ಧೆಯ ಅಧ್ಯಕ್ಷರಾದ ಶ್ರೀಮತಿ. ಭಾರತಿ ಮೇಡಂ ಹಾಜರಿದ್ದು ಸಭೆಯನ್ನು ಉದ್ದೇಶಿಸಿ ಎಸ್.ಎಸ್.ಎಲ್.ಸಿ. ಫಲಿತಾಂಶದ ಬಗ್ಗೆ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು. ಸಂಸ್ದೆಯ ಟ್ರಸ್ಟ್ನ ಅಧ್ಯಕ್ಷರಾದ ಶ್ರೀಯುತ. ಬಿ.ಆರ್. ರವಿಯವರು ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.