ದಿನಾಂಕ 15/8/2022 ರಂದು ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ. ಪ್ರೊ. ಕೆ.ಎಲ್. ಪದ್ಮಿನಿ ಹೆಗಡೆ ಅವರು ಭಾಗವಹಿಸಿದ್ದರು. ನಮ್ಮ ಸಂಸ್ಧೆಯ ಟ್ರಸ್ಟಿಗಳಾದ ಶ್ರೀ. ಶ್ರೀನಿವಾಸ್‍ರಾವ್ ಅವರು ಅಧ್ಯಕ್ಷತೆ ವಹಿಸಿದ್ದರು, ವಿಶೇಷ ಅತಿಥಿಗಳಾಗಿ ಭಾರತೀಯ ಸಶಸ್ತ್ರ ದಳದ ಕ್ಯಾಪ್‍ಟನ್ ವಿನಯ್ ವಿಠಲ್ ನೌಕಾದಳದಿಂದ ನಾಗಶರತ್ ಸರ್ ಹಾಗೂ ಟ್ರಸ್ಟಿಗಳಾದ ಶ್ರೀ.ರಾಜೇಂದ್ರ ಸರ್ ಅವರುಗಳು ಆಗಮಿಸಿದ್ದು ವಿಶೇಷವಾಗಿತ್ತು. ನಮ್ಮ ಸಂಸ್ಧೆಯ ಸ್ಥಾಪಕರಾದ ಶ್ರೀಯುತ. ನಾಗೇಶ್‍ರಾವ್ ಅವರು ರಚಿಸಿರುವ ಕಂದ ಪುಸ್ತಕಗಳನ್ನು ಇ-ಪುಸ್ತಕಗಳನ್ನಾಗಿ ಪರಿವರ್ತಿಸಿರುವ ಶ್ರೀಯುತ. ಯೋಗನಂದ ಅವರು ಆಗಮಿಸಿದ್ದರು. ಧ್ವಜದ ಮಾಹಿತಿಯನ್ನು ಶ್ರೀಯುತ. ಸೀತರಾಮ್‍ರವರು ಮಕ್ಕಳಿಗೆ ಬಹಳ ಸೊಗಸಾಗಿ ವಿವರಿಸಿದರು. ಸಂಸ್ಧೆಯ ಅಧ್ಯಕ್ಷರಾದ ಶ್ರೀಮತಿ. ಭಾರತಿ ಎನ್, ಗೌ|| ಕಾರ್ಯದರ್ಶಿನಿಯವರಾದ ಯಶಸ್ವಿನಿ ಜಗದೀಶ್, ಜಂಟಿ ಕಾರ್ಯದರ್ಶಿನಿ ಶ್ರೀಮತಿ. ಶ್ಯಾಮಲಜಯರಾಂ, ಟ್ರಸ್ಟಿಗಳು, ಸದಸ್ಯರುಗಳು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ಈ ಸಂದರ್ಭದಲ್ಲಿ ಭಾಗವಹಿಸಿದ್ದರು. 72ನೇ ಸಾಲಿನಲ್ಲಿ ಓದಿದ ವಿದ್ಯಾರ್ಥಿ ತಂಡದಿಂದ ಸಂಸ್ಧೆಗೆ ಚೆಕ್ ನೀಡಲಾಯಿತು. ಈ ಎಲ್ಲಾ ವೇದಿಕೆ ಕಾರ್ಯಕ್ರಮಗಳ ಮುಕ್ತಾಯವಾದ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮ ಮುಗಿದ ನಂತರ ಮಕ್ಕಳಿಗೆ ಸಿಹಿಯನ್ನು ವಿತರಿಸಲಾಯಿತು.















