ದಿನಾಂಕ 26/01/2022 ರಂದು 73ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ನಮ್ಮ ಶಾಲೆಯಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಶ್ರೀಮತಿ. ಪುಷ್ಪಲತ ಸಿದ್ಧಪ್ಪಾಜಿ ಅವರು ಆಯ್ಕೆಯಾಗಿದ್ದು ಅವರಿಂದ ಧ್ವಜರೋಹಣ ಕಾರ್ಯವನ್ನು ನೆರವೇರಿಸಲಾಯಿತು. ನಮ್ಮ ಸಂಸ್ಧೆಯ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀಯುತ. ಬಿ.ಆರ್. ರವಿಯವರು ಆ ದಿನದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿನಿ, ಆಡಳಿತ ಮಂಡಳಿಯ ಸದಸ್ಯರು, ಅಧ್ಯಾಪಕ ವೃಂದದವರು, ಸಂಸ್ಧೆಯ ಎಲ್ಲಾ ಸಿಂಬಂಧಿ ವರ್ಗದವರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವು ಯಶಸ್ವಿಯಾಗಿ ನೇರವೇರಿತು. ನೆರೆದಿದ್ದ ಎಲ್ಲರಿಗೂ ಸಿಹಿಯನ್ನು ಹಂಚಲಾಯಿತು.








